SMS ಪರಿಶೀಲನೆ ವಿಫಲವಾದರೆ ಏನು ಮಾಡುವುದು?
PhonePe ಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸುವಾಗ SMS ಪರಿಶೀಲನೆ ವಿಫಲವಾಗಲು ಈ ಕೆಳಗಿನವು ಕಾರಣವಾಗಿರಬಹುದು:
- ಈ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಪರಿಶೀಲನೆಗಾಗಿ SMS ಕಳುಹಿಸಲು ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದಿರಬಹುದು.
- SMS ಅನ್ನು ಕಳಿಸುವಾಗ ನೀವು ಸರಿಯಾದ ಸಿಮ್ ಸ್ಲಾಟ್ ಅನ್ನು ಆಯ್ಕೆಮಾಡಿಲ್ಲದಿರಬಹುದು. ಇದನ್ನು ನೀವು ಫೋನ್ನಲ್ಲಿ Settings >> SIM & Network >> Default SIM ಗೆ ಹೋಗುವ ಮೂಲಕ ಪರಿಶೀಲಿಸಬಹುದು.
- PhonePe ಆ್ಯಪ್ಗೆ ನೀವು SMS ಕಳಿಸುವ ಅನುಮತಿಗಳನ್ನು ಸಕ್ರಿಯಗೊಳಿಸಿಲ್ಲದಿರಬಹುದು. ಇದನ್ನು ನೀವು ನಿಮ್ಮ ಫೋನ್ನಲ್ಲಿ Settings >> Apps & Notifications >> PhonePe >> Permissions ಗೆ ಹೋಗಿ ಪರಿಶೀಲಿಸಬಹುದು.
- ನಿಮ್ಮ ಇಂಟರ್ನೆಟ್ ಸಂಪರ್ಕ ಉತ್ತಮವಾಗಿಲ್ಲದಿರಬಹುದು ಅಥವಾ ಮೊಬೈಲ್ ನೆಟ್ವರ್ಕ್ ದುರ್ಬಲವಾಗಿರಬಹುದು.
ಪ್ರಮುಖ ಸಂಗತಿ: SMS ಪರಿಶೀಲನೆ ವಿಫಲವಾಗಲು ಪ್ರಮುಖವಾಗಿ ದುರ್ಬಲ ಮೊಬೈಲ್ ನೆಟ್ವರ್ಕ್ ಸಂಪರ್ಕ ಕಾರಣವಾಗಿರಬಹುದು. ಆದ್ದರಿಂದ, ಮೇಲಿನ ತಪಾಸಣೆಗಳನ್ನು ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅನಂತರ ಮತ್ತೆ ಪ್ರಯತ್ನಿಸಿ.