UPI ಐಡಿ (VPA) ಎಂದರೇನು?
UPI ಐಡಿ ಅಥವಾ VPA (ವರ್ಚುವಲ್ ಪೇಮೆಂಟ್ ಅಡ್ರೆಸ್) ಎನ್ನುವುದು ಬ್ಯಾಂಕ್ ಖಾತೆಯ ಬದಲಿಗೆ UPI ಮೂಲಕ ಪಾವತಿಗಳನ್ನು ಮಾಡಲು ಬಳಸುವ ಒಂದು ಅನನ್ಯ ಐಡಿಯಾಗಿದೆ.
PhonePe UPI ಐಡಿಯು ಕನಿಷ್ಠ 3 ಅಕ್ಷರಗಳು ಮತ್ತು ಅವುಗಳ ಮುಂದೆ "@ybl / @ibl" ಹ್ಯಾಂಡಲ್ ಅನ್ನು ಹೊಂದಿರುವ ವಿಶಿಷ್ಟ ಐಡಿ ಆಗಿರುತ್ತದೆ.
ಈ ಐಡಿ ಬಳಸಿಕೊಂಡು, ನೀವು ಹಣ ಕಳಿಸುವುದು ಮತ್ತು ಹಣಕ್ಕಾಗಿ ವಿನಂತಿಸುವುದು ಮಾಡಬಹುದು. ಇಂಥ ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು IFSC ಕೋಡ್‌ಗಳಂತಹ ಗೌಪ್ಯ ಮಾಹಿತಿಯನ್ನು ನೀಡುವ ಅಗತ್ಯವಿರುವುದಿಲ್ಲ.
ನೀವು ನಿಮ್ಮ UPI ಐಡಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ವಿವರಗಳನ್ನು ನೋಡಿ.