PhonePe ಯಲ್ಲಿ ನಾನು ಬ್ಯಾಂಕ್ ಖಾತೆಯನ್ನು ಸೇರಿಸುವುದು ಹೇಗೆ? 

 UPI ಪಾವತಿಗಳನ್ನು ಮಾಡಲು ಮತ್ತು ಇತರರಿಂದ ಹಣವನ್ನು ಸ್ವೀಕರಿಸಲು ನೀವು ನಿಮ್ಮ ಪ್ರಸ್ತುತ ಬ್ಯಾಂಕ್ ಖಾತೆಯನ್ನು PhonePe ಯಲ್ಲಿ ಸೇರಿಸಬಹುದು. ಹಾಗೆ ಮಾಡಲು, ನೀವು ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

            PhonePe ಯಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸಲು:

  1. PhonePe ಅಪ್ಲಿಕೇಶನ್ ಮುಖಪುಟ ಪರದೆಯಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ
  2.  Payment Methods/ಪಾವತಿ ವಿಧಾನಗಳು ವಿಭಾಗದ ಅಡಿಯಲ್ಲಿ Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ ಮತ್ತು Add New Bank Account/ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ
  3. ಪಟ್ಟಿಯಿಂದ ನಿಮ್ಮ ಬ್ಯಾಂಕ್ ಆಯ್ಕೆಮಾಡಿ. ಹುಡುಕಾಟ ಪಟ್ಟಿಯಲ್ಲಿ ಬ್ಯಾಂಕ್ ಹೆಸರನ್ನು ನಮೂದಿಸುವ ಮೂಲಕ ಕೂಡಾ ನಿಮ್ಮ ಬ್ಯಾಂಕ್ ಅನ್ನು ನೀವು ಹುಡುಕಬಹುದು.
    ಗಮನಿಸಿ: ನಿಮ್ಮ ಬ್ಯಾಂಕ್ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ, ನೀವು PhonePe ಯಲ್ಲಿ ಬ್ಯಾಂಕ್‌ ಖಾತೆ ಸೇರಿಸಲು ಸಾಧ್ಯವಿಲ್ಲ. ಬ್ಯಾಂಕ್‌ ಖಾತೆ ಪಟ್ಟಿಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ. 
  4. ಪರಿಶೀಲನೆ ಉದ್ದೇಶಗಳಿಗಾಗಿ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದ ಒಂದು SMS ಕಳುಹಿಸಲಾಗುತ್ತದೆ. SMS ಅನುಮತಿಗಾಗಿ ಕೋರಿದಾಗ, ನೀವು ನೀಡುವುದನ್ನು ಖಚಿತಪಡಿಸಿಕೊಳ್ಳಿ.
    ಗಮನಿಸಿ: ನಿಮ್ಮ ನಿಮ್ಮ ಬ್ಯಾಂಕ್ ಖಾತೆಗೆ ನೀಡಿದ ಮೊಬೈಲ್ ನಂಬರ್ ಮೂಲಕವೇ ನೀವು PhonePe ಖಾತೆಗೆ ನೋಂದಾಯಿಸಿದ್ದರೆ, ಆಗ UPI ಪ್ಲಾಟ್‌ಫಾರ್ಮ್ ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕನ್ನು ಹುಡುಕುತ್ತದೆ.
  5. ಬೇರೆ ಯಾವುದೇ ಆ್ಯಪ್‌ನಲ್ಲಿ ನೀವು ಈ ಮೊದಲು ಬ್ಯಾಂಕ್ ಖಾತೆಗಾಗಿ UPI ಪಿನ್ ಸೆಟ್ ಮಾಡಿರದಿದ್ದರೆ, UPI ಪಿನ್ ಸೆಟ್ ಮಾಡಿ ಒತ್ತಿರಿ. ಈ ಖಾತೆಗೆ ನೀವು ಈಗಾಗಲೇ UPI ಪಿನ್ ಹೊಂದಿದ್ದರೆ, ಲಿಂಕ್ ಒತ್ತಿರಿ.

        SMS ಪರಿಶೀಲನೆ ವಿಫಲವಾದರೆ ಏನು ಮಾಡುವುದು? ಮತ್ತು ಬ್ಯಾಂಕ್‌ ನಲ್ಲಿ ನೀಡಲಾದ ಮೊಬೈಲ್‌ ನಂಬರ್‌ ಅಪ್ಡೇಟ್‌ ಮಾಡುವುದು ಹೇಗೆ?ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.