ನನ್ನ ಬ್ಯಾಂಕ್ ಖಾತೆಯನ್ನು ಸೇರಿಸಲು ಸಾಧ್ಯವಾಗದಿದ್ದರೆ ಏನು ಮಾಡುವುದು?
PhonePe ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಲು ನಿಮಗೆ ಸಾಧ್ಯವಾಗದಿರಲು ಹಲವಾರು ಕಾರಣಗಳಿರಬಹುದು. ನೀವು ಪರಿಶೀಲಿಸಬಹುದಾದ ಕೆಲವು ವಿಷಯಗಳು ಇಲ್ಲಿವೆ
- PhonePe ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ನೋಂದಾಯಿಸಿದ ಸಂಖ್ಯೆ ಒಂದೇ ಆಗಿರಬೇಕು.
- ನೀವು ಸೇರಿಸಲು ಪ್ರಯತ್ನಿಸುತ್ತಿರುವ ಬ್ಯಾಂಕ್ ಖಾತೆಗಾಗಿ ನೀವು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಸಕ್ರಿಯಗೊಳಿಸಿದ್ದೀರಿ.
- ನೀವು ಈ ಕೆಳಗಿನ ರೀತಿಯ ಬ್ಯಾಂಕ್ ಅಕೌಂಟ್ ಸೇರಿಸಲು ಪ್ರಯತ್ನಿಸುತ್ತಿರಬಹುದು:
- ಉಳಿತಾಯ ಖಾತೆ
- ಚಾಲ್ತಿ ಖಾತೆ
- ಜಂಟಿ/HUF ಖಾತೆ (ನೀವು ಪ್ರಾಥಮಿಕ ಖಾತೆದಾರರಾಗಿದ್ದರೆ ಮಾತ್ರ)
- ಓವರ್ ಡ್ರಾಫ್ಟ್ ಖಾತೆ
ನಿಮಗೆ ಹಚ್ಚಿನ ಮಾಹಿತಿ ಬೇಕಿದ್ದರೆ, ದಯವಿಟ್ಟು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
"ಖಾತೆ ಕಂಡುಬಂದಿಲ್ಲ" ಎಂಬ ದೋಷ ಕಂಡುಬಂದರೆ ಏನು ಮಾಡುವುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ