ಬ್ಯಾಂಕ್ ಖಾತೆಯನ್ನು ಸೇರಿಸುವಾಗ "ಖಾತೆ ಕಂಡುಬಂದಿಲ್ಲ" ಎಂಬ ದೋಷ ಕಂಡುಬಂದರೆ ಏನು ಮಾಡುವುದು?
ಬ್ಯಾಂಕ್ ಖಾತೆಯನ್ನು ಸೇರಿಸುವಾಗ "ಖಾತೆ ಕಂಡುಬಂದಿಲ್ಲ" ಎಂಬ ದೋಷ ಕಂಡುಬಂದರೆ, ಅದಕ್ಕೆ ಇವು ಕಾರಣವಾಗಿರಬಹುದು:
- ತಾಂತ್ರಿಕ ಸಮಸ್ಯೆಗಳಿಂದಾಗಿ ಬ್ಯಾಂಕ್ಗೆ ನಿಮ್ಮ ಖಾತೆಯ ವಿವರಗಳನ್ನು ಹುಡುಕಲು ಸಾಧ್ಯವಾಗದಿರಬಹುದು.
- ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ನಂಬರ್ ಮತ್ತು ನಿಮ್ಮ PhonePe ಖಾತೆಯ ನೋಂದಾಯಿತ ಮೊಬೈಲ್ ನಂಬರ್ ಒಂದೇ ಆಗಿಲ್ಲದಿರಬಹುದು
- ನಿಮ್ಮ ಇಂಟರ್ನೆಟ್ ಸಂಪರ್ಕದಲ್ಲಿ ತೊಂದರೆಯಿರಬಹುದು.
ಸೂಚನೆ: ದಯವಿಟ್ಟು ನಿಮ್ಮ ಆಪ್ ಅಪ್‌ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಡಿವೈಸ್‌ನ ಕ್ಯಾಶೆಯನ್ನು ಕೂಡಾ ನೀವು ಕ್ಲಿಯರ್ ಮಾಡಬಹುದು
ಬ್ಯಾಂಕ್ ನಲ್ಲಿ ನೀಡಲಾದ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಮತ್ತು ಸಮಸ್ಯೆ ಮುಂದುವರಿದರೆ ನೀವು ಏನು ಮಾಡಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.