ನನ್ನ ಬ್ಯಾಂಕ್ PhonePe ಪಟ್ಟಿಯಲ್ಲಿ ಇಲ್ಲದಿದ್ದರೆ ಏನು ಮಾಡುವುದು?
ನಿಮ್ಮ ಬ್ಯಾಂಕ್ ಅನ್ನು PhonePe ನಲ್ಲಿ ಪಟ್ಟಿ ಮಾಡಿರದಿದ್ದರೆ, UPI ಮೂಲಕ ಹಣವನ್ನು ಕಳುಹಿಸುವುದಕ್ಕೆ ಮತ್ತು ಸ್ವೀಕರಿಸುವುದಕ್ಕೆ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಲು ನಿಮಗೆ ಸಾಧ್ಯವಾಗುವುದಿಲ್ಲ. PhonePe ನಲ್ಲಿ ಪಾವತಿಗಳನ್ನು ಮಾಡಲು ನೀವು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ವಾಲೆಟ್‌ನಂತಹ ಇತರ ಪಾವತಿ ವಿಧಾನಗಳನ್ನು ಬಳಸಬಹುದು.
ಗಮನಿಸಿ: ನೀವು ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಯೊಂದಿಗೆ PhonePe ನಲ್ಲಿ ನೋಂದಾಯಿಸಿದ್ದರೆ, ಕೆಲವು ಬ್ಯಾಂಕ್‌ಗಳು ಪಟ್ಟಿಯಲ್ಲಿ ಕಾಣಿಸದೇ ಇರಬಹುದು. ಏಕೆಂದರೆ ಆ ಬ್ಯಾಂಕ್‌ಗಳು ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳೊಂದಿಗೆ UPI ಪಾವತಿಗಳನ್ನು ಬೆಂಬಲಿಸುವುದಿಲ್ಲ.