SMS ಪರಿಶೀಲನೆ ವಿಫಲವಾದರೆ ಏನು ಮಾಡುವುದು?
ವಿವಿಧ ಕಾರಣಗಳಿಗಾಗಿ ನಿಮಗೆ SMS ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗದಿರಬಹುದು. ಮತ್ತೊಮ್ಮೆ ಪ್ರಯತ್ನಿಸುವ ಮೊದಲು ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳುವಂತೆ ನಾವು ವಿನಂತಿಸುತ್ತೇವೆ
- ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ ಪರಿಶೀಲನೆಗೆ SMS ಕಳುಹಿಸಲು ಸಾಕಷ್ಟು ಬ್ಯಾಲೆನ್ಸ್ ಹೊಂದಿರಬೇಕು.
- SMS ಅನ್ನು ಕಳಿಸುವಾಗ ನೀವು ಸರಿಯಾದ ಸಿಮ್ ಸ್ಲಾಟ್ ಅನ್ನು ಆಯ್ಕೆಮಾಡಿಲ್ಲದಿರಬಹುದು. ಇದನ್ನು ನೀವು ಫೋನ್ನಲ್ಲಿ Settings >> SIM & Network >> Default SIM ಗೆ ಹೋಗುವ ಮೂಲಕ ಪರಿಶೀಲಿಸಬಹುದು.
- PhonePe ಆ್ಯಪ್ಗೆ ನೀವು SMS ಕಳಿಸುವ ಅನುಮತಿಗಳನ್ನು ಸಕ್ರಿಯಗೊಳಿಸಿಲ್ಲದಿರಬಹುದು. ಇದನ್ನು ನೀವು ನಿಮ್ಮ ಫೋನ್ನಲ್ಲಿ Settings >> Apps & Notifications >> PhonePe >> Permissions ಗೆ ಹೋಗಿ ಪರಿಶೀಲಿಸಬಹುದು.
- ನಿಮ್ಮ ಇಂಟರ್ನೆಟ್ ಸಂಪರ್ಕ ಉತ್ತಮವಾಗಿಲ್ಲದಿರಬಹುದು
ಸೂಚನೆ: SMS ಪರಿಶೀಲನೆ ವೈಫಲ್ಯಕ್ಕೆ ಪ್ರಾಥಮಿಕ ಕಾರಣವೆಂದರೆ ಕಳಪೆ ನೆಟ್ವರ್ಕ್ ಸಂಪರ್ಕ. - ನಿಮ್ಮ ಆಪ್ ಅಪ್ಡೇಟ್ ಆಗಿಲ್ಲದಿರಬಹುದು.
ಗಮನಿಸಿ: ನೀವು ಡ್ಯುಯಲ್ ಸಿಮ್ ಸಾಧನವನ್ನು ಬಳಸುತ್ತಿದ್ದರೆ, ದಯವಿಟ್ಟು PhonePe ಯಲ್ಲಿ ನೋಂದಾಯಿಸದ ಮೊಬೈಲ್ ಸಂಖ್ಯೆಯ ಸಿಮ್ ಸ್ಲಾಟ್ ಅನ್ನು ನಿಷ್ಕ್ರಿಯಗೊಳಿಸಿ.