PhonePe ಯಲ್ಲಿ ನನ್ನ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? 

ನೀವು PhonePe ಯಲ್ಲಿ ಸೇರಿಸಿದ ಬ್ಯಾಂಕ್ ಖಾತೆಗಳಲ್ಲಿನ ಬ್ಯಾಲೆನ್ಸ್ ಪರಿಶೀಲಿಸಲು:

  1. ನಿಮ್ಮ PhonePe ಆಪ್ ಹೋಮ್ ಸ್ಕ್ರೀನ್‌ನಲ್ಲಿ ಹಣ ವರ್ಗಾವಣೆ  ವಿಭಾಗದ ಅಡಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ ಟ್ಯಾಪ್‌ ಮಾಡಿ.
  2. ಆ ಖಾತೆಯ UPI ಪಿನ್ ನಮೂದಿಸಿ. 
  3. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ. 

ಪರ್ಯಾವಾಗಿ ನೀವು

  1. PhonePe ಅಪ್ಲಿಕೇಷನ್‌ ಹೋಂ ಸ್ಕ್ರೀನ್‌ನಲ್ಲಿ ನಿಮ್ಮ ಪ್ರೊಫೈಲ್‌ ಫೋಟೋ ಟ್ಯಾಪ್‌ ಮಾಡಿ
  2. Payment Methods/ಪಾವತಿ ವಿಧಾನಗಳು ವಿಭಾಗದ ಅಡಿಯಲ್ಲಿ Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ
  3. ಬ್ಯಾಲೆನ್ಸ್‌ ಚೆಕ್‌ ಮಾಡಿ ಟ್ಯಾಪ್‌ ಮಾಡಿ. 
  4. ಆ ಅಕೌಂಟಿಗೆ UPI PIN  ನಮೂದಿಸಿ
  5. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಸ್ಕ್ರೀನ್‌ನಲ್ಲಿ ಗೋಚರವಾಗುತ್ತದೆ
    ಗಮನಿಸಿ: ನೀವು PhonePe ಯಲ್ಲಿ ಸೇರಿಸಿದ ಖಾತೆಗಳಿಗೆ ಮಾತ್ರ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು.

 ನಿಮ್ಮ ಬ್ಯಾಂಕ್‌ ಖಾತೆಯನ್ನು PhonePe ಯಲ್ಲಿ ಸೇರಿಸುವಿಕೆ ಯ ಬಗ್ಗೆ ಇನ್ನಷ್ಟು ತಿಳಿಯಿರಿ.