ನಾನು ಒಂದು UPI ಐಡಿಗೆ (VPA) ಹಣ ಕಳಿಸುವುದು ಹೇಗೆ? 

PhonePe ಆ್ಯಪ್‌ನಲ್ಲಿ ಸ್ನೇಹಿತರ UPI ಐಡಿಗೆ ಹಣ ಕಳಿಸಲು: 

  1.  ಆ್ಯಪ್‌ನ ಹೋಮ್‍ಸ್ಕ್ರೀನ್‌ನಲ್ಲಿ Transfer Money/ಹಣ ಕಳಿಸಿ ವಿಭಾಗದಲ್ಲಿ 'ಬ್ಯಾಂಕಿಗೆ/UPI' ಗೆ ಕ್ಲಿಕ್ ಮಾಡಿ.
  2. ಸರ್ಚ್ ಬಾರ್‌ನಲ್ಲಿ ಹಣ ಸ್ವೀಕರಿಸುವವರ  UPI ಐಡಿ ನಮೂದಿಸಿ.
  3. ನಿಮ್ಮ ಸಂಪರ್ಕದವರ ಒಂದು UPI ಐಡಿಯನ್ನು ಆಯ್ಕೆಮಾಡಿ ಅಥವಾ ಐಡಿ ನಮೂದಿಸಿದ ನಂತರ ದೃಢೀಕರಿಸಿ ಅನ್ನು ಒತ್ತಿರಿ.
  4. ಮೊತ್ತವನ್ನು ನಮೂದಿಸಿ.
  5. 'ಕಳುಹಿಸಿ' ಅನ್ನು ಒತ್ತಿರಿ.

ನೀವು ಕಳಿಸಿದ ಮೊತ್ತವನ್ನು ನಿಮ್ಮ ಸ್ನೇಹಿತರು ತಮ್ಮ UPI ಐಡಿಗೆ ಲಿಂಕ್ ಮಾಡಿದ ಅವರ ಪ್ರಾಥಮಿಕ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

ಪ್ರಮುಖ ಸಂಗತಿ: ಹಣವನ್ನು ಕಳುಹಿಸುವಾಗ, ನೀವು ಪಾವತಿ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಮಾತ್ರ ಆರಿಸಬೇಕಾಗುತ್ತದೆ, ನಿಮ್ಮ UPI ಐಡಿಯನ್ನು ಅಲ್ಲ.

ಗಮನಿಸಿ: ಕೆಲವೊಮ್ಮೆ, ಆಂತರಿಕ ತಾಂತ್ರಿಕ ದೋಷದಿಂದಾಗಿ, ನೀವು ನಮೂದಿಸಿದ UPI ಐಡಿ ಸರಿಯಾಗಿದ್ದರೂ ಅದನ್ನು ದೃಢೀಕರಿಸಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಸ್ವಲ್ಪ ಸಮಯ ಬಿಟ್ಟು ಮತ್ತೆ ಪ್ರಯತ್ನಿಸಿ.

 ಯಾರಾದರೂ ನಿಮ್ಮ UPI ಐಡಿಗೆ ಹಣ ಕಳಿಸಿದರೆ, ಅದನ್ನು ನೀವು ಎಲ್ಲಿ ಸ್ವೀಕರಿಸುತ್ತೀರಿ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.