ನನ್ನ UPI ಐಡಿಗಳನ್ನು ಯಾವುದಕ್ಕೆ ಬಳಸಿಕೊಳ್ಳಬಹುದು?
ನಿಮ್ಮ PhonePe UPI ಐಡಿಯನ್ನು ನೀವು ಈ ಕೆಳಗಿನವುಗಳಿಗೆ ಬಳಸಬಹುದು:
- ನಿಮ್ಮ ಸಂಪರ್ಕದವರಿಗೆ ನಿಮ್ಮ UPI ಐಡಿಯನ್ನು ನೀಡುವ ಮೂಲಕ ಅವರಿಂದ ಹಣವನ್ನು ಸ್ವೀಕರಿಸಲು.
- ನಿಮ್ಮ ಸಂಪರ್ಕದವರು ನಿಮ್ಮ UPI ಐಡಿಗೆ ಹಣಕ್ಕಾಗಿ ಕೋರಿಕೆ ಕಳಿಸಿದಾಗ ಅವರಿಗೆ ಹಣವನ್ನು ಕಳುಹಿಸಲು.
- UPI ಪಾವತಿ ಆಯ್ಕೆಯನ್ನು ಬಳಸಿ ವ್ಯಾಪಾರಿ ವೇದಿಕೆಗಳಲ್ಲಿ ಪಾವತಿಗಳನ್ನು ಮಾಡುವುದು. ನಿಮ್ಮ PhonePe UPI ಐಡಿಯನ್ನು ನಮೂದಿಸಿದರೆ, ಆಗ ಆ್ಯಪ್ನಲ್ಲಿ ಮತ್ತು SMS ಮೂಲಕ ಪಾವತಿ ವಿನಂತಿಯನ್ನು ನಿಮಗೆ ಕಳಿಸಲಾಗುತ್ತದೆ. ಆಗ ನೀವು ಪಾವತಿ ಮಾಡಬಹುದು.
ನೀವು ನಿಮ್ಮ ಸಂಪರ್ಕದ UPI ಐಡಿಯನ್ನು ಈ ಕೆಳಗಿನ ಕಾರ್ಯಕ್ಕಾಗಿ ಬಳಸಬಹುದು:
- ಅವರ ಮೊಬೈಲ್ ನಂಬರ್ಗೆ ಬದಲಾಗಿ ಅವರ UPI ಐಡಿ ಬಳಸಿಕೊಂಡು ಹಣವನ್ನು ಕಳುಹಿಸಬಹುದು. ನೀವು PhonePe ಆ್ಯಪ್ನ ಹೋಮ್ ಸ್ಕ್ರೀನ್ನಲ್ಲಿ 'ಹಣ ಕಳಿಸಿ' ವಿಭಾಗದಿಂದ ಇದನ್ನು ಮಾಡಬಹುದಾಗಿದೆ.
ಗಮನಿಸಿ: ನೀವು UPI ಮೂಲಕ ಯಾವುದೇ ಪಾವತಿ ಮಾಡುವಾಗ, ಪಾವತಿ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಮಾತ್ರ ನೀವು ಆರಿಸಬೇಕಾಗುತ್ತದೆ, ನಿಮ್ಮ UPI ಐಡಿಯನ್ನು ಅಲ್ಲ.
ನೀವು UPI ಐಡಿಗೆ ಹೇಗೆ ಹಣ ಕಳಿಸಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.