ನಾನು ನನ್ನ UPI PIN ಅನ್ನು ಸೆಟ್‌ ಅಥವಾ ರೀಸೆಟ್‌ ಮಾಡುವುದು ಹೇಗೆ?

ಡೆಬಿಟ್ ಕಾರ್ಡ್ ಅಥವಾ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ UPI PIN ಅನ್ನು ನೀವು ಸೆಟ್‌ ಮಾಡಬಹುದು ಅಥವಾ ರೀಸೆಟ್‌ ಮಾಡಬಹುದು:
 

ನಿಮ್ಮ ಡೆಬಿಟ್‌ ಕಾರ್ಡ್‌ ಉಪಯೋಗಿಸಿ ಮಾಡುವುದು:

ನೀವು ನಿಮ್ಮ ಡೆಬಿಟ್‌ ಕಾರ್ಡ್‌ ಉಪಯೋಗಿಸಲು ಬಯಸಿದರೆ,

  1. PhonePe ಅಪ್ಲಿಕೇಷನ್‌ ಹೋಂ ಸ್ಕ್ರೀನ್‌ನಲ್ಲಿ ನಿಮ್ಮ ಪ್ರೊಫೈಲ್‌ ಫೋಟೋ ಟ್ಯಾಪ್‌ ಮಾಡಿ. 
  2. Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ ಮತ್ತು ನೀವು UPI ಪಿನ್ ಅನ್ನು ಮರುಹೊಂದಿಸಲು ಅಥವಾ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
  3.  UPI PIN ನ ನಂತರ ಇರುವ ಈ ಕೆಳಗೆ ತೋರಿಸಿರುವಂತೆ ರೀಸೆಟ್‌ ಮಾಡಿ/Reset ಟ್ಯಾಪ್‌ ಮಾಡಿ
  4. ನಿಮ್ಮ ಎಟಿಎಂ / ಡೆಬಿಟ್ ಕಾರ್ಡ್‌ನ ವಿವರಗಳನ್ನು ನಮೂದಿಸಿ
  5. ನೀವು SMS ಮೂಲಕ ಸ್ವೀಕರಿಸುವ 6-ಅಂಕಿಯ OTP ಯನ್ನು ನಮೂದಿಸಿ
    ಸೂಚನೆ: ನೀವು SMS ಅನುಮತಿಗಳನ್ನು ಸಕ್ರಿಯಗೊಳಿಸಿದ್ದರೆ PhonePe ಯು OTP ಯನ್ನು ಸ್ವಯಂ-ಪಡೆದುಕೊಳ್ಳುತ್ತದೆ. PhonePe ಯು OTP ಯನ್ನು ಸ್ವಯಂ-ಪಡೆದುಕೊಳ್ಳಲು ಅನುಮತಿ ನೀಡಲು - Phone Settings >> Apps & Notifications >> PhonePe >> Permissions ಗೆ ಹೋಗಿ.
  6.  ನಿಮ್ಮ ಡೆಬಿಟ್/ಕ್ರೆಡಿಟ್‌ ಕಾರ್ಡ್‌ಗಾಗಿ 4-ಅಂಕಿಯ ATM PIN ನಮೂದಿಸಿ
  7. ನೀವು ಸೆಟ್ ಮಾಡಲು ಬಯಸುವ ಹೊಸ 4/6-ಅಂಕಿಯ ‘UPI PIN ನಮೂದಿಸಿ
  8. ಖಚಿತಪಡಿಸಲು ಇನ್ನೊಮ್ಮೆ UPI PIN ಹಾಕಿ.
  9. Confirm/ದೃಢೀಕರಿಸಿ ಅನ್ನು ಕ್ಲಿಕ್ ಮಾಡಿ

ಇವುಗಳನ್ನೂ ನೋಡಿ:

ನಾನು ಏಕೆ OTP ಸ್ವೀಕರಿಸುತ್ತಿಲ್ಲ?
ನನಗೆ ಡೆಬಿಟ್‌ ಅಥವಾ ATM ಕಾರ್ಡ್‌ ಇಲ್ಲದಿದ್ದರೆ ಏನು ಮಾಡಬೇಕು?
 ನಾನು ನನ್ನ ATM PIN ಅನ್ನು ಮರೆತರೆ ಏನು ಮಾಡಬೇಕು?

ನಿಮ್ಮ ಆಧಾರ್‌ ಕಾರ್ಡ್‌ ಉಪಯೋಗಿಸಿ ಮಾಡುವುದು

ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಉಪಯೋಗಿಸಿ:

  1. PhonePe ಅಪ್ಲಿಕೇಶನ್ ಮುಖಪುಟದಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  2. Bank Accounts/ಬ್ಯಾಂಕ್ ಖಾತೆಗಳು ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ 
  3. ಆ ಖಾತೆಯ ಅಡಿಯಲ್ಲಿ UPI PIN ಪಕ್ಕದಲ್ಲಿ ಸೆಟ್‌ ಮಾಡಿ ಅಥವಾ ರೀಸೆಟ್‌  ಟ್ಯಾಪ್ ಮಾಡಿ.
  4. ಬ್ಯಾಂಕ್ ಆಯ್ಕೆಯೊಂದಿಗೆ ಲಿಂಕ್ ಮಾಡಲಾದ ಆಧಾರ್ ಸಂಖ್ಯೆಯನ್ನು ಆಯ್ಕೆಮಾಡಿ ಮತ್ತು Proceed/ಮುಂದುವರೆಯಿರಿ ಟ್ಯಾಪ್ ಮಾಡಿ.
  5. ನಿಮ್ಮ ಆಧಾರ್ ಸಂಖ್ಯೆಯ ಮೊದಲ 6 ಅಂಕೆಗಳನ್ನು ನಮೂದಿಸಿ.
    ಗಮನಿಸಿ: ನೀವು ಎರಡು OTP ಗಳನ್ನು ಸ್ವೀಕರಿಸುತ್ತೀರಿ, ಒಂದು ನಿಮ್ಮ ಬ್ಯಾಂಕ್‌ನಿಂದ ಮತ್ತು ಒಂದು UIDAI ನಿಂದ.
  6. ಎರಡೂ OTP ಗಳನ್ನು ನಮೂದಿಸಿ.
  7. ಹೊಸ 4 ಅಥವಾ 6-ಅಂಕಿಯ UPI PIN ನಮೂದಿಸಿ.
  8. ಖಚಿತಪಡಿಸಲು UPI PIN ಅನ್ನು ಮರು-ನಮೂದಿಸಿ.
  9. Confirm/ಖಚಿತಪಡಿಸಿ ಟ್ಯಾಪ್ ಮಾಡಿ.

ಇವುಗಳನ್ನೂ ನೋಡಿ:

ನಾನು ಎರಡು ಬಾರಿ ತಪ್ಪಾದ ಆಧಾರ್‌ ಸಂಖ್ಯೆ ನಮೂದಿಸಿದರೆ ಏನಾಗುತ್ತದೆ?
ನನ್ನ ಆಧಾರ್ ಲಿಂಕ್ ಮಾಡಲಾದ ಸಂಖ್ಯೆ ಮತ್ತು PhonePe ನೋಂದಾಯಿತ ಸಂಖ್ಯೆ ವಿಭಿನ್ನವಾಗಿದ್ದರೆ ನಾನು ಏನು ಮಾಡಬೇಕು?
ನನ್ನ UPI PIN ಹೊಂದಿಸಲು ಆಧಾರ್ ಆಯ್ಕೆಯನ್ನು ನೋಡಲು ನನಗೆ ಏಕೆ ಸಾಧ್ಯವಾಗುತ್ತಿಲ್ಲ?ನಾನು OTP ಯನ್ನು ಏಕೆ ಸ್ವೀಕರಿಸುತ್ತಿಲ್ಲ?