ನನ್ನ UPI ಪಿನ್‌ ಹೇಗೆ ನನ್ನ  ATM PIN ಅಥವಾ MPIN ಗಿಂತ ಭಿನ್ನವಾಗಿದೆ?

ATM ಪಿನ್ ಎನ್ನುವುದು 4-ಅಂಕಿಯ ಕೋಡ್ ಆಗಿದ್ದು ಇದನ್ನು ಸಾಮಾನ್ಯವಾಗಿ ಬ್ಯಾಂಕಿನಿಂದ ನೀಡಲಾಗುತ್ತದೆ ಮತ್ತು ಡೆಬಿಟ್ ಕಾರ್ಡ್ ಪಾವತಿ ಮತ್ತು ATM ನಗದು ವಿಥ್‌ಡ್ರಾ ಮಾಡಲು ಇದನ್ನು ಬಳಸಲಾಗುತ್ತದೆ.

MPIN ಇದು ಪಾಸ್‌ಕೋಡ್ ಆಗಿದ್ದು, ಮೊಬೈಲ್ ಬ್ಯಾಂಕಿಂಗ್ ಪೇಮೆಂಟ್‌ಗಳಾ IMPS ಮತ್ತು NEFT ಪಾವತಿಗಳಿಗೆ ಹಾಗೂ ರಾಷ್ಟ್ರೀಯ ಏಕೀಕೃತ USSD ಪ್ಲಾಟ್‌ಫಾರ್ಮ್‌ನಲ್ಲಿ ಪೇಮೆಂಟ್‌ಗಳನ್ನು ಮಾಡಲು ನೀವು ಬಳಸಬಹುದು.

UPI ಪಿನ್ ಎನ್ನುವುದು 4 ಅಥವಾ 6-ಅಂಕಿಯ ಪಾಸ್‌ವರ್ಡ್ ಆಗಿದ್ದು ಅದನ್ನು ನೀವು ಯಾವುದೇ ಪೇಮೆಂಟ್ ಆಪ್‌ನಲ್ಲಿ UPI ಪಾವತಿ ಮಾಡಲು ಬಳಸಬಹುದು. ನೀವು PhonePe ಗೆ ಸೇರಿಸುವ ಯಾವುದೇ ಬ್ಯಾಂಕ್ ಖಾತೆಗೆ ನೀವು ಒಂದು ಅನನ್ಯ UPI ಪಿನ್ ಅನ್ನು ಹೊಂದಿಸಬೇಕು, ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಮಾತ್ರ. 

ಗಮನಿಸಿ: ದಯವಿಟ್ಟು ನಿಮ್ಮ UPI ಪಿನ್, ATM ಪಿನ್, ಮತ್ತು MPIN ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. PhonePe ಅಥವಾ ಬ್ಯಾಂಕುಗಳು ಎಂದಿಗೂ ನಿಮ್ಮ ಬಳಿ ಈ ಪಿನ್‌ಗಳನ್ನು ಕೇಳುವುದಿಲ್ಲ.