UPI ಸಂಖ್ಯೆ ಎಂದರೇನು? 

UPI ಸಂಖ್ಯೆಯು ವಿಶಿಷ್ಟವಾದ 8, 9 ಅಥವಾ 10 ಅಂಕೆಗಳ ಸಂಖ್ಯೆಯಾಗಿದ್ದು, ಯಾವುದೇ ಪೇಮೆಂಟ್ ಅಪ್ಲಿಕೇಶನ್‌ನಲ್ಲಿ UPI ಪಾವತಿಗಳನ್ನು ಸ್ವೀಕರಿಸಲು ಪಾವತಿ ವಿಳಾಸವಾಗಿ ಬಳಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಪೇಮೆಂಟ್ ಅಪ್ಲಿಕೇಶನ್‌ಗಳಲ್ಲಿ ನೀವು ನೋಂದಾಯಿಸಿದ್ದರೆ, ಅದು ನಿಮ್ಮ 10-ಅಂಕಿಯ UPI ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ UPI ಸಂಖ್ಯೆಯು ನಿಮ್ಮ PhonePe ನೋಂದಾಯಿತ ಮೊಬೈಲ್ ಸಂಖ್ಯೆ ಆಗಿರುತ್ತದೆ ಮತ್ತು NPCI ಯ (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ಡೇಟಾಬೇಸ್‌ನಲ್ಲಿ UPI ID (VPA) ಗೆ ಲಿಂಕ್ ಮಾಡಲಾಗುತ್ತದೆ. ಯಾವುದೇ ಇತರ ಪಾವತಿ ಅಪ್ಲಿಕೇಶನ್‌ನಿಂದ ಈ UPI ಸಂಖ್ಯೆಯನ್ನು ಬಳಸಿಕೊಂಡು ನಿಮಗೆ ಕಳುಹಿಸಲಾದ ಯಾವುದೇ ಹಣವನ್ನು PhonePe ನಲ್ಲಿ ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

 NPCI ನ ಡೇಟಾಬೇಸ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೇಟಾಬೇಸ್‌ ಗೆ ಏಕೆ ಸೇರಿಸಲಾಗಿದೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.