ನನ್ನ KYC ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಸಹಿ ಮಾಡುವುದು ಹೇಗೆ?
ನೀವು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಮೇಲೆ ನಿಮಗೆ ಆಧಾರ್ ಇ-ಸೈನ್ ಸ್ಕ್ರೀನ್ ಕಾಣಿಸುತ್ತದೆ, ನಿಮ್ಮ ವೀಡಿಯೊ ಪರಿಶೀಲನೆ ಮುಗಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಡಿಜಿಟಲ್ ಸಹಿ ಮಾಡಿ (ಆಧಾರ್ ಇ-ಸೈನ್ ಅಲ್ಲ).
- ಆಧಾರ್ ಇ-ಸೈನ್ ಸ್ಕ್ರೀನ್‌ನಲ್ಲಿ , ಮುಂದುವರೆಸಿ ಅನ್ನು ಟ್ಯಾಪ್ ಮಾಡಿ.
- ನೀವು ಸಲ್ಲಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ, ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ, ಮತ್ತು ಸಹಿಯನ್ನು ಖಚಿತಪಡಿಸಿ ಅನ್ನು ಟ್ಯಾಪ್ ಮಾಡಿ.
- NSDL ಇ-ಸೈನ್ ಸ್ಕ್ರೀನ್‌ನಲ್ಲಿ, ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ, ಮತ್ತು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ವರ್ಚುವಲ್ ಐಡಿಯನ್ನು ನಮೂದಿಸಿ ಮತ್ತು OTP ಕಳುಹಿಸಿ ಅನ್ನು ಟ್ಯಾಪ್ ಮಾಡಿ.
ಗಮನಿಸಿ: ಯಾವ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಪ್ರಸ್ತುತ ಲಿಂಕ್ ಮಾಡಲಾದ ಮಾನ್ಯವಾದ ವರ್ಚುವಲ್ ಐಡಿ ಯನ್ನು ಹೊಂದಿದ್ದಾರೋ, ಅವರು ಮಾತ್ರ OTP ಜನರೇಟ್ ಮಾಡಲು ಇದನ್ನು ಬಳಸಬಹುದು. - ನಿಮ್ಮ ಅಧಾರ್ ಸಂಖ್ಯೆಗೆ ನೀವು ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯನ್ನು ನಮೂದಿಸಿ ಮತ್ತು ನಿಮ್ಮ KYC ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಸಹಿ ಮಾಡಲು OTP ಪರಿಶೀಲಿಸಿ ಅನ್ನು ಟ್ಯಾಪ್ ಮಾಡಿ.
- ಒಮ್ಮೆ ನೀವು KYC ಅಪ್ಲಿಕೇಶನ್‌ನಲ್ಲಿ ಯಶಸ್ವಿಯಾಗಿ ಡಿಜಿಟಲ್ ಸಹಿ ಮಾಡಿದ ಬಳಿಕ, ನೀವು ಮುಂದುವರೆದು ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಾಗಿ ಪಾವತಿ ಮಾಡಬಹುದು.
ಆಧಾರ್ ಪರಿಶೀಲನೆಗಾಗಿ ನಿಮಗೆ OTP ಬರದಿದ್ದರೆ ಏನು ಮಾಡಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.