PhonePe ಯಲ್ಲಿ ನಾನು ಯಾವ ರೀತಿಯ ರಿವಾರ್ಡ್‌ಗಳನ್ನು ಸ್ವೀಕರಿಸಬಹುದು?

PhonePe ಯಲ್ಲಿ ನೀವು ಈ ಕೆಳಗಿನ ಪ್ರಕಾರದ ರಿವಾರ್ಡ್‌ಗಳನ್ನು ಸ್ವೀಕರಿಸಬಹುದು:

ಕ್ಯಾಶ್‌ಬ್ಯಾಕ್ - PhonePe ಮೂಲಕ ನೀವು ಮಾಡುವ ಯಾವುದೇ ಪಾವತಿಗೆ ಅದರ ಆಫರ್ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ನೀವು ಕ್ಯಾಶ್‌ಬ್ಯಾಕ್ ಗೆಲ್ಲಬಹುದಾಗಿದೆ. ಈ ಮೊತ್ತವನ್ನು ನಿಮ್ಮ ವಿಥ್‌ಡ್ರಾ ಮಾಡಲಾಗದ (ಗಿಫ್ಟ್ ವೋಚರ್) PhonePe ವಾಲೆಟ್ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ. ನೀವು ಈ ಬ್ಯಾಲೆನ್ಸ್ ಅನ್ನು PhonePe ಮೂಲಕ ನೀವು ಮಾಡುವ ಯಾವುದೇ ಪಾವತಿಗಳಿಗೆ ಬಳಸಬಹುದು. ಆದರೆ, ನೀವು ಈ ಮೊತ್ತವನ್ನು PhonePe ಯಲ್ಲಿ ಲಿಂಕ್ ಮಾಡಿದ ನಿಮ್ಮ ಬ್ಯಾಂಕ್ ಖಾತೆಗೆ ವಿಥ್‌ಡ್ರಾ ಮಾಡಿಕೊಳ್ಳುವ ಅಥವಾ ಅದನ್ನು ಇನ್ನೊಬ್ಬ PhonePe ಬಳಕೆದಾರರಿಗೆ ವರ್ಗಾಯಿಸುವ ಅವಕಾಶ ಇರುವುದಿಲ್ಲ.
ನಿಮ್ಮ ಕ್ಯಾಶ್‌ಬ್ಯಾಕ್‌ ಮೊತ್ತವನ್ನು ಉಪಯೋಗಿಸಿ ಯಾವ ರೀತಿಯ ಪೇಮೆಂಟ್‌ ಮಾಡಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.
ಗಮನಿಸಿ: ಮಾರ್ಚ್ 31 ಕ್ಕೆ ಕೊನೆಗೊಳ್ಳುವ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನೀವು ಗರಿಷ್ಠ₹9,999 ಕ್ಯಾಶ್‌ಬ್ಯಾಕ್ ಪಡೆಯಬಹುದು.ಸ್ಕ್ರ್ಯಾಚ್