PhonePe ಮೂಲಕ ನಾನು ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿ ನನ್ನ ಆರ್ಡರ್‌ಗಳಿಗೆ ಪಾವತಿ ಮಾಡುವುದು ಹೇಗೆ?
PhonePe ಮೂಲಕ ನೀವು ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿ ಮಾಡುವ ಆರ್ಡರ್‌ಗಳಿಗೆ ಅಥವಾ ಖರೀದಿಗಳಿಗೆ ಈ ಕೆಳಗಿನಂತೆ ಪಾವತಿ ಮಾಡಬಹುದಾಗಿದೆ:
- ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳ ಪಾವತಿ ಪುಟ ಅಥವಾ ಸ್ಕ್ರೀನ್‌ನಲ್ಲಿರುವ PhonePe UPI ಅಥವಾ UPI ಒತ್ತಿರಿ.
- ಅಗತ್ಯವಿದ್ದಲ್ಲಿ ನಿಮ್ಮ UPI ಐಡಿ (VPA) ನಮೂದಿಸಿ.
- ನೀವು SMS ಮೂಲಕ ಮತ್ತು ನಿಮ್ಮ PhonePe ಆ್ಯಪ್‌ನಲ್ಲಿ ಪೇಮೆಂಟ್ ರಿಕ್ವೆಸ್ಟ್ ನೋಟೀಫಿಕೇಶನ್ ಪಡೆಯುತ್ತೀರಿ. ಆಗ ಕೆಳಗಿನವುಗಳಲ್ಲಿ ಒಂದನ್ನು ಮಾಡಲು ನೀವು ಆಯ್ಕೆ ಮಾಡಬಹುದು:
- SMS ನಲ್ಲಿ ಪಡೆದ ಲಿಂಕ್ ಅನ್ನು ಒತ್ತಿರಿ. ಆಗ PhonePe ಆ್ಯಪ್‌ನಲ್ಲಿ ಪಾವತಿ ಪುಟ ತೆರೆದುಕೊಳ್ಳುತ್ತದೆ.
- ನಿಮ್ಮ PhonePe ಆ್ಯಪ್ ತೆರೆಯಿರಿ. ಆಗ ತೆರೆದುಕೊಳ್ಳುವ ಪಾಪ್-ಅಪ್ ನಲ್ಲಿ ನೀವು ಬಿಲ್ಲಿಂಗ್ ಮೊತ್ತ ಮತ್ತು ಪಾವತಿಸಿ ಅಥವಾ ನಿರಾಕರಿಸಿ ಎಂಬ ಆಯ್ಕೆಗಳನ್ನು ನೀವು ನೋಡುತ್ತೀರಿ. ಪಾವತಿ ಮಾಡಲು ಪಾವತಿಸಿ ಒತ್ತಿರಿ.
- ನೀವು ಬಯಸುವ ಪಾವತಿ ಪ್ರಕಾರವನ್ನು ಆಯ್ಕೆಮಾಡಿ. ಲಭ್ಯವಿರುವ ಪಾವತಿ ಆಯ್ಕೆಗಳು:
- UPI
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ನೀವು ಆಯ್ಕೆ ಮಾಡಿದ ಪಾವತಿ ಪ್ರಕಾರಕ್ಕೆ ಅನುಗುಣವಾಗಿ UPI ಪಿನ್ / ಕಾರ್ಡ್ ವಿವರಗಳನ್ನು ನಮೂದಿಸಿ.
- Submit/ಸಲ್ಲಿಸಿ ಒತ್ತಿರಿ.
ಪಾವತಿ ಯಶಸ್ವಿಯಾದ ನಂತರ, ನೀವು ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ದೃಢೀಕರಣ ಪುಟವನ್ನು ನೋಡುತ್ತೀರಿ.
ಪ್ರಮುಖ ಸಂಗತಿ: ಯಾವುದೇ ಪಾವತಿಯನ್ನು ಅಧಿಕೃತಗೊಳಿಸುವ ಮೊದಲು ನೀವು ಪಾವತಿ ವಿನಂತಿಯ ಮೊತ್ತ ಮತ್ತು ಕಳುಹಿಸುವವರನ್ನು ಪರಿಶೀಲಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾವತಿ ವಿನಂತಿಯನ್ನು ಅನುಮೋದಿಸಲು ನೀವು ಬಯಸದಿದ್ದರೆ ಅಥವಾ ನಿಮಗೆ ಅದರ ಕುರಿತು ತಿಳಿದಿಲ್ಲದಿದ್ದರೆ, ನಿರಾಕರಿಸಿ ಒತ್ತಿರಿ.