ನನ್ನ ಆರ್ಡರ್‌ನಲ್ಲಿ ಸಮಸ್ಯೆಯಿದ್ದರೆ ಏನು ಮಾಡುವುದು?
ನಾವು PhonePe ಬಳಸಿ ಮಾಡುವ ನಿಮ್ಮ ಪಾವತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ನೀವು ಯಾವುದೇ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ವಹಿವಾಟು ನಡೆಸಿದ್ದಲ್ಲಿ, ಆ ಸೇವಾದಾರರು / ವ್ಯಾಪಾರಿಗಳು ನಿಮ್ಮ ಯಾವುದೇ ಆರ್ಡರ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸೂಕ್ತವಾಗಿರುತ್ತಾರೆ.
ಉದಾಹರಣೆಗೆ, ನೀವು ಒಂದು ಬಾಹ್ಯ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ PhonePe ಮೂಲಕ ಪಾವತಿ ಮಾಡಿ ಬಸ್ ಬುಕಿಂಗ್ ಮಾಡಿದ್ದೀರಿ ಎಂದುಕೊಳ್ಳಿ.
- ನಿಮ್ಮ ಪಾವತಿ ಪೆಂಡಿಂಗ್ ಇದ್ದಲ್ಲಿ ಅಥವಾ ವಿಫಲಗೊಂಡಲ್ಲಿ, ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
- PhonePe ಮೂಲಕ ಪಾವತಿ ಯಶಸ್ವಿಯಾದ ನಂತರ ಉಂಟಾಗುವ ಯಾವುದೇ ಸಮಸ್ಯೆಗಳಿಗೆ, ಅಂದರೆ ಪ್ರಯಾಣ, ಆಪರೇಟರ್ ಸಮಸ್ಯೆಗಳು, ಬಸ್ ಸೇವೆ, ರೀಫಂಡ್ ಮುಂತಾದವುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ದಯವಿಟ್ಟು ಆಯಾ ವ್ಯಾಪಾರಿಗಳ ಗ್ರಾಹಕ ಬೆಂಬಲವನ್ನು ನೇರವಾಗಿ ಸಂಪರ್ಕಿಸಿ.