ಇತರೆ ವೆಬ್‌ಸೈಟ್ ಅಥವಾ ಆ್ಯಪ್‌ಗಳಲ್ಲಿ ನಾನು PhonePe ಪಾವತಿ ಆಯ್ಕೆಯನ್ನು ಎಲ್ಲಿ ಕಾಣಬಹುದು?
ನೀವು ವೆಬ್‌ಸೈಟ್ ಅಥವಾ ಆ್ಯಪ್‌ನ ಪಾವತಿ ಪುಟ ಅಥವಾ ಸ್ಕ್ರೀನ್‌ನಲ್ಲಿ PhonePe ಪಾವತಿ ಆಯ್ಕೆಯನ್ನು ನೀವು ಕಾಣುತ್ತೀರಿ. ವಿಭಿನ್ನ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ನಿಖರವಾದ ಪಾವತಿ ಆಯ್ಕೆಯು ವಿಭಿನ್ನ ಸ್ಥಳಗಳಲ್ಲಿರುತ್ತದೆ.
ಆದರೂ, ಸಾಮಾನ್ಯವಾಗಿ ಅದು ಈ ಕೆಳಗಿನಂತಿರುತ್ತದೆ:
- ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ಬ್ಯಾಂಕಿಂಗ್ ಆಯ್ಕೆಗಳ ಕೆಳಗೆ PhonePe UPI ಎಂಬ ಪ್ರತ್ಯೇಕ ಪಾವತಿ ಆಯ್ಕೆಯಿರುತ್ತದೆ.
- Wallets ವಿಭಾಗದ ಅಡಿಯಲ್ಲಿ
- UPI ವಿಭಾಗದ ಅಡಿಯಲ್ಲಿ
ನೀವು ಯಾವುದೇ ವೆಬ್‌ಸೈಟ್ ಅಥವಾ ಆ್ಯಪ್‌ನ ಪಾವತಿ ಪುಟ ಅಥವಾ ಸ್ಕ್ರೀನ್‌ನಲ್ಲಿ Pay Now ಆಯ್ಕೆಯನ್ನು ನೋಡಿದರೆ, ಅದನ್ನು ಒತ್ತಿರಿ. ಆಗ ಎಲ್ಲಾ ಪಾವತಿ ಆಯ್ಕೆಗಳನ್ನು ಪ್ರದರ್ಶಿಸುವ ಪುಟ ಅಥವಾ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಅಲ್ಲಿ PhonePe ಬಳಸಿ ಪಾವತಿಸುವ ಆಯ್ಕೆಯನ್ನು ಪ್ರತ್ಯೇಕವಾಗಿ ಅಥವಾ ವಾಲೆಟ್‌ಗಳು ಅಥವಾ UPI ವಿಭಾಗದ ಅಡಿಯಲ್ಲಿ ಪಟ್ಟಿ ಮಾಡಲಾಗಿರುತ್ತದೆ.
ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿ PhonePe ಮೂಲಕ ಪಾವತಿ ಮಾಡುವುದು ಹೇಗೆ ಎಂಬುದರ ಇನ್ನಷ್ಟು ತಿಳಿಯಿರಿ.