ನನ್ನ ಸಾಲದ ಮರುಪಾವತಿ ಏಕೆ ಬಾಕಿಯಾಗಿದೆ?
PhonePe ನಲ್ಲಿ ಸಾಲ ಮರುಪಾವತಿಗಳು ಸಾಮಾನ್ಯವಾಗಿ ತ್ವರಿತವಾಗಿರುತ್ತವೆ, ಆದರೆ ಅಪರೂಪದ ಸಂದರ್ಭಗಳಲ್ಲಿ, ಅವು ಪೂರ್ಣಗೊಳಿಸಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದರರ್ಥ ನಾವು ಬ್ಯಾಂಕ್ /ಸಾಲದಾತರಿಂದ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ. ಅಂತಹ ಸಂದರ್ಭಗಳಲ್ಲಿ, ದಯವಿಟ್ಟು ಕೆಲವು ಗಂಟೆಗಳ ಕಾಲ ಕಾಯಿರಿ ಮತ್ತು ನಿಮ್ಮ ಸಾಲ ಮರುಪಾವತಿಯ ಅಂತಿಮ ಸ್ಟೇಟಸ್‌ಗಾಗಿ ನಿಮ್ಮ PhonePe ಆ್ಯಪ್ ನಲ್ಲಿ ಇತಿಹಾಸ ವಿಭಾಗವನ್ನು ಪರಿಶೀಲಿಸಿ.
ಬಾಕಿ ಆಗಿರುವ ಸಾಲ ಮರುಪಾವತಿ ವಿಫಲವಾದರೆ, ಡೆಬಿಟ್ ಮಾಡಿದ ಹಣವನ್ನು ನಿಮಗೆ ರೀಫಂಡ್ ಮಾಡಲಾಗುತ್ತದೆ. ನೀವು UPI ಮೂಲಕ ಪಾವತಿ ಮಾಡಿದರೆ, ನಿಮ್ಮ ಹಣವನ್ನು 3 ರಿಂದ 5 ದಿನಗಳಲ್ಲಿ ನಿಮಗೆ ಮರುಪಾವತಿ ಮಾಡಲಾಗುತ್ತದೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ, ನಿಮ್ಮ ಹಣವನ್ನು 7 ರಿಂದ 9 ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ, ಮತ್ತು ವಾಲೆಟ್ ಅಥವಾ ಗಿಫ್ಟ್ ಕಾರ್ಡ್ ಪೇಮೆಂಟನ್ನು 24 ಗಂಟೆಗಳಲ್ಲಿ ಮಾಡಲಾಗುತ್ತದೆ.