PhonePe ಯಲ್ಲಿ ನನ್ನ ಚಿನ್ನವನ್ನು ಮಾರಾಟ ಮಾಡುವುದು ಹೇಗೆ?

PhonePe ಯಲ್ಲಿ ನಿಮ್ಮ ಚಿನ್ನವನ್ನು ಮಾರಾಟ ಮಾಡಲು:

  1. ನಿಮ್ಮ PhonePe ಆ್ಯಪ್‌ ಮುಖಪುಟದಲ್ಲಿ Recharge & Pay Bills/ರೀಚಾರ್ಜ್ ಮತ್ತು ಬಿಲ್‌ಗಳನ್ನು ಪಾವತಿಸಿ ಅಡಿಯಲ್ಲಿ See All/ಎಲ್ಲವನ್ನೂ ನೋಡಿ ಅನ್ನು ಟ್ಯಾಪ್ ಮಾಡಿ.
  2. Purchases/ಖರೀದಿಗಳು ವಿಭಾಗದ ಅಡಿಯಲ್ಲಿ Gold/ಚಿನ್ನ ಅನ್ನು ಟ್ಯಾಪ್ ಮಾಡಿ.
  3. ಹೋಂ ಪೇಜ್‌ ನಲ್ಲಿ View Locker details/ಲಾಕರ್‌ ವಿವರಗಳನ್ನು ವೀಕ್ಷಿಸಿ ಟ್ಯಾಪ್‌ ಮಾಡಿ
  4. Sell/ಮಾರಾಟ ಮಾಡಿ ಟ್ಯಾಪ್‌ ಮಾಡಿ ಮತ್ತು ಪೂರೈಕೆದಾರರನ್ನು ಆಯ್ಕೆ ಮಾಡಿ (ಅಗತ್ಯವಿದ್ದರೆ).
  5. ಪಾಪ್-ಅಪ್‌ನಲ್ಲಿ Confirm/ದೃಢೀಕರಿಸಿ ಟ್ಯಾಪ್ ಮಾಡಿ.

ನಿಮ್ಮ ಚಿನ್ನವನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತದೆ ಮತ್ತು 48 ಗಂಟೆಗಳ ಒಳಗಾಗಿ ಲಿಂಕ್ ಮಾಡಿದ ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಗೆ ಮೊತ್ತವನ್ನು ಜಮಾ ಮಾಡಲಾಗುತ್ತದೆ. PhonePe ನಲ್ಲಿ ನೀವು ಚಿನ್ನವನ್ನು ಕನಿಷ್ಠ ₹5 ಕ್ಕೆ ಮಾರಾಟ ಮಾಡಬಹುದು.

ಗಮನಿಸಿ: ಡೆಲಿವರಿ ವಿನಂತಿಯನ್ನು ಸಲ್ಲಿಸಲು ನಿಮ್ಮ ಡಿಜಿಟಲ್ ಲಾಕರ್‌ನಲ್ಲಿ ನೀವು ಕನಿಷ್ಟ 0.5 ಗ್ರಾಂ ಪ್ರಮಾಣವನ್ನು ಹೊಂದಿರಬೇಕು. ಅಪ್‌ಡೇಟ್‌ ಮಾಡಿದ ಗೋಲ್ಡ್‌ ಬ್ಯಾಲೆನ್ಸ್‌ ವೀಕ್ಷಿಸಲು ನಿಮ್ಮ ಚಿನ್ನದ ಲಾಕರ್ ಅನ್ನು ನೀವು ಪರಿಶೀಲಿಸಬಹುದು.

ಸಂಬಂಧಿತ ಪ್ರಶ್ನೆಗಳು
PhonePe ಯಲ್ಲಿ ಚಿನ್ನವನ್ನು ಮಾರಾಟ ಮಾಡಲು ಯಾವುದಾದರೂ ನಿರ್ಬಂಧಗಳಿವೆಯೇ?.