ನನ್ನ ಚಿನ್ನದ ಮಾರಾಟ ವಿನಂತಿಯು ಬಾಕಿ ಉಳಿದರೆ ಏನು ಮಾಡುವುದು
PhonePeಯಲ್ಲಿ ನೀವು ಖರೀದಿಸಿದ ಚಿನ್ನವನ್ನು ಮಾರಾಟ ಮಾಡುವುದು ತ್ವರಿತ ಮತ್ತು ಸುಲಭ. ಆದಾಗ್ಯೂ, ಕೆಲವೊಮ್ಮೆ, ಬ್ಯಾಂಕಿನ ಕಡೆಯಿಂದ ತಾಂತ್ರಿಕ ಸಮಸ್ಯೆಗಳಿಂದಾಗಿ, ನಿಮ್ಮ ಚಿನ್ನದ ಮಾರಾಟ ವಿನಂತಿಯನ್ನು ಪ್ರಕ್ರಿಯೆಗೊಳಿಸಲು 48 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.
ಅಂತಹ ಸನ್ನಿವೇಶಗಳಲ್ಲಿ, ನಿಮ್ಮ ಚಿನ್ನದ ಮಾರಾಟದ ವಿನಂತಿಯ ಅಂತಿಮ ಸ್ಟೇಟಸ್ ಅಪ್ಡೇಟ್ ಮಾಡುವವರೆಗೆ ಕಾಯಿರಿ. ನಿಮ್ಮ PhonePe ಅಪ್ಲಿಕೇಶನ್‌ನ ಇತಿಹಾಸ ವಿಭಾಗದಲ್ಲಿ ನೀವು ಸ್ಟೇಟಸ್ ವೀಕ್ಷಿಸಬಹುದು.
ಗಮನಿಸಿ: ಚಿನ್ನದ ಮಾರಾಟದ ವಿನಂತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಇತಿಹಾಸ ವಿಭಾಗದಲ್ಲಿ ನಿಮ್ಮ PhonePeಯ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ಬದಲಾಯಿಸಲು ಸೂಚಿಸಿದರೆ, ನೀವು ಬದಲಾಯಿಸಬೇಕಾಗಬಹುದು.
PhonePeಯಲ್ಲಿ ಪ್ರಾಥಮಿಕ ಬ್ಯಾಂಕ್ ಅಕೌಂಟ್ ಬದಲಾಯಿಸಲು ಇನ್ನಷ್ಟು ತಿಳಿಯಿರಿ.