ನನ್ನ ಸಬ್‌ಸ್ಕ್ರಿಪ್ಷನ್ ಮೇಲೆ ಯಾವುದಾದರೂ ನಿರ್ಬಂಧಗಳಿವೆಯೇ?
ಪ್ರಸ್ತುತವಾಗಿ, ಒಂದು ಸಬ್‌ಸ್ಕ್ರೈಬರ್ ಖಾತೆಯಿಂದ ಕೇವಲ ಒಂದು ಸ್ಕ್ರೀನ್ ಮೇಲೆ ಮಾತ್ರ ಪ್ಲೇ ಮಾಡಬಹುದು. ನಿಮ್ಮ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಅನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿರ್ಬಂಧವಿರುತ್ತದೆ.
ಒಂದು ವೇಳೆ ‘ಒಂದಕ್ಕಿಂತ ಹೆಚ್ಚು ಸಾಧನಗಳಿಂದ ನೀವು ಪ್ರೀಮಿಯಂ ವೀಡಿಯೊಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದೀರಿ’ ಎಂದು ಹೇಳುವ ದೋಷವನ್ನು ನಿಮಗೆ ತೋರಿಸಿದಲ್ಲಿ, ಆಗ ದಯವಿಟ್ಟು ನೀವು ಈಗಾಗಲೇ ಮತ್ತೊಂದು ಸಾಧನದಿಂದ ಅದೇ ಸಮಯದಲ್ಲಿ ಮತ್ತೊಂದು ಪ್ರೀಮಿಯಂ ವೀಡಿಯೊವನ್ನು ಸ್ಟ್ರೀಮಿಂಗ್ ಮಾಡುತ್ತಿದ್ದೀರಾ ಎಂಬುದನ್ನು ಪರಿಶೀಲಿಸಿ. ಪ್ರಸ್ತುತ ವೀಡಿಯೊವನ್ನು ನೋಡುವುದನ್ನು ಮುಂದುವರಿಸಲು, ನೀವು ಹಿಂದಿನ ವೀಡಿಯೊವನ್ನು ನಿಲ್ಲಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರೀಮಿಯಂ ವೀಡಿಯೊವನ್ನು ನೋಡುವುದನ್ನು ಮುಂದುವರಿಸಲು ಪ್ರಸ್ತುತ ಸಾಧನದಲ್ಲಿ ರಿಫ್ರೆಶ್ ಮಾಡಿ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Disney+ Hotstar ಅನ್ನು [email protected] ಮೂಲಕ ಸಂಪರ್ಕಿಸಿ.